Press "Enter" to skip to content

ನಕಲಿ ಉತ್ಪಾದನೆಗಳ ತಡೆ

ನರೇನ್ ಎಲೆಕ್ಟ್ರಿಕ್ಸ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಅತಿ ಹೇರಳವಾಗಿ ಲಭ್ಯವಿದೆ. ಈ ನಮ್ಮ ಸುಗಮ ಹಾದಿಗೆ ನಂಬಿ ಸಹಕರಿಸಿರುವ ನಿಮ್ಮೆಲ್ಲರಿಗೂ ಈ ಸುಸಂಧರ್ಭದಲ್ಲಿ ನರೇನ್ ಎಲೆಕ್ಟ್ರಿಕ್ಸ್ ವತಿಯಿಂದ ಧನ್ಯವಾದಗಳನ್ನು ಹೇಳಬಯಸುತ್ತೇವೆ.

ಇತ್ತೀಚೆಗೆ ನರೇನ್ ಎಲೆಕ್ಟ್ರಿಕ್ಸ್ ಆಟೋ ಸ್ಟಾರ್ಟ್ ಮಾದರಿಯ ಉತ್ಪನ್ನಗಳ ನಕಲಿ ಮಾದರಿಯಲ್ಲಿ ಕರ್ನಾಟಕ ಮಾರುಕಟ್ಟೆಯಲ್ಲಿ ಲಗ್ಗೆ ಹಾಕಿದೆ ಎಂಬುದು ನಮ್ಮ ಗಮನಕ್ಕೆ ಬಂದಿದ್ದು, ನಕಲಿ ಉತ್ಪಾದನೆಗಳ ಗುರುತುಗಳು, ಪ್ಯಾಕೇಜಿಂಗಾಗಲಿ, ಲೋಗೋವಾಗಲಿ ಮತ್ತಿತರ ಯಾವುದೇ ಅನುಸಾರ ಅಸಲಿ ನರೇನ್ ಎಲೆಕ್ಟ್ರಿಕ್ಸ್ ಉತ್ಪನ್ನಗಳೊಂದಿಗೆ ಪತ್ತೆ ಮಾಡುವುದು ಗ್ರಾಹಕರಿಗೆ ಅಸಾಧ್ಯವಾಗಿದೆ. ಹಾಗೂ ನಕಲಿ ಉತ್ಪಾದನೆಗಳ ಅಧಿಕಾರ – ವಿತರಣೆ ಮಾಡುವ ವ್ಯಕ್ತಿಗಳು ಅಸಲಿ ಮುಖವಾಡವಿದ್ದಂತೆ ವರ್ತಿಸುತ್ತಿದ್ದಾರೆ.

ಈ ನಕಲಿ ಉತ್ಪಾದನೆಗಳ ಗುಣಮಟ್ಟ ಹಾಗೂ ವಿಶ್ವಾಸ ತುಂಬಾ ಕೀಳಾಗಿದ್ದು, ಉತ್ಪನ್ನಗಳ ಕಾರ್ಯವೈಖರಿ ಅಸಲಿ ನರೇನ್ ಎಲೆಕ್ಟ್ರಿಕ್ಸ್ ಉತ್ಪನ್ನಗಳಿಗಿಂತಲೂ ಕೆಳಮಟ್ಟದ್ದಾಗಿದೆ, ಹಾಗಾಗಿ ಈ ರೀತಿ ನಕಲಿ ಉತ್ಪನ್ನಗಳನ್ನು ಬಳಸುವುದುದರಿಂದ ಬಳಕೆದಾರರು ಅದರ ವಿಶ್ವಾಸ – ಕಾರ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.

ನಕಲಿ ಉತ್ಪನ್ನಗಳನ್ನು ಬಳಸುವ ಬಳಕೆದಾರರ ತೊಂದರೆಗಳಿಗೆ ನರೇನ್ ಎಲೆಕ್ಟ್ರಿಕ್ಸ್ ಯಾವುದೇ ರೀತಿಯ ಹೊಣೆಗಾರರಾಗುವುದಿಲ್ಲ.

ಹಾಗಾಗಿ ಮಾರುಕಟ್ಟೆಯಲ್ಲಿ ನಿಮಗೆ ನರೇನ್ ಎಲೆಕ್ಟ್ರಿಕ್ಸ್ ಮಾದರಿಯ ನಕಲಿ ಉತ್ಪನ್ನಗಳು ಕಂಡು ಬಂದರೆ ಕೂಡಲೇ ನರೇನ್ ಎಲೆಕ್ಟ್ರಿಕ್ಸ್ ಅನ್ನು ಸಂಪರ್ಕಿಸಿ. ನಾವು ನಿಮ್ಮ ಜೊತೆ ಕೈ ಜೋಡಿಸಿ ನಕಲಿ ಉತ್ಪನ್ನಗಳನ್ನು ನಕಲಿ ವಿತರಕರಿಗೆ ಹಿಂತಿರುಗಿಸಲು ಸಹಕರಿಸುತ್ತೇವೆ.

Be First to Comment

Leave a Reply

Other Articles

Follow Us

Follow us on Facebook Subscribe us on Youtube 0

Shop Naren Products